ಉಸ್ಮಾನ್ (ಊತ್ಮಾನ್) 1

1259-1326. ತುರ್ಕಿಯ ಉಸ್ಮಾನ್‍ಲೀ ಅಥವಾ ಆಟೋಮನ್ ಜನರ ಮುಖಂಡ. ಅವರ ಅಭ್ಯುದಯಕ್ಕೆ ಬಹಳಮಟ್ಟಿಗೆ ಕಾರಣನಾದವ. ಆಟೋಮನ್ ಚಕ್ರವರ್ತಿ ವಂಶದ ಮೂಲಪುರುಷ. ಈ ಜನರಿಗೆ ಆಟೋಮನ್ ಎಂಬ ಹೆಸರು ಬಂದದ್ದೂ ಇವನಿಂದಲೇ. 

	ಹದಿಮೂರನೆಯ ಶತಮಾನದ ಅಂತ್ಯಕಾಲದಲ್ಲಿ ಬಿeóÁನ್‍ಟಿಯಂ ಕ್ರೈಸ್ತ ಸಾಮ್ರಾಜ್ಯ ಶಿಥಿಲಗೊಂಡಿತ್ತು. ಆಗ ಏಷ್ಯಮೈನರಿನಲ್ಲಿ ತುರ್ಕಿಯ ಅಮೀರರನೇಕರು ಸ್ವತಂತ್ರ ಪಾಳೆಯಪಟ್ಟುಗಳನ್ನು ಸ್ಥಾಪಿಸಿಕೊಂಡಿದ್ದರು. ಅಂಥ ಅಮೀರರಲ್ಲಿ ಉಸ್ಮಾನ್ ಒಬ್ಬ. ಈತ ತನ್ನ ಜೊತೆಯ ಅಮೀರರನ್ನು ಕೂಡಿಕೊಂಡು ಬಿeóÁನ್‍ಟಿಯಂ ಮೇಲೆ ದಾಳಿಮಾಡಿ ಅದನ್ನು ವಶಪಡಿಸಿಕೊಂಡ. ತನ್ನ ಜೀವಿತದ ಕೊನೆಯ ವರೆಗೂ ಸಾಮ್ರಾಜ್ಯವಿಸ್ತರಣೆಯೇ ಈತನ ಕಾರ್ಯವಾಗಿತ್ತು. ಇವನ ಸಾಧನೆಯೇ ಮುಂದೆ ಬೆಳೆದು ಬಾಳಿದ ಆಟೋಮನ್ ಚಕ್ರಾಧಿಪತ್ಯಕ್ಕೆ ನಾಂದಿಯಾಯಿತೆನ್ನಬಹುದು.									
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ